ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಕಾರ್ಪೊರೇಟ್ ಗುರುತಿನ ಸಂಖ್ಯೆ (CIN)  U40109KA2002SGC030425
ಸರಕು ಮತ್ತು ಸೇವಾ ತೆರಿಗೆ ಸಂಖ್ಯೆ (GST)  29AADCM7029H1ZA

 

map

ಅಭಿವೃದ್ಧಿಯ ಪಥದಲ್ಲಿ ವಿದ್ಯುಚ್ಛಕ್ತಿಯೂ ಒಂದು ಅಗತ್ಯದ ಸಂಪನ್ಮೂಲವಾಗಿದೆ. ಯಾವುದೇ ಮುಂದುವರಿಯುತ್ತಿರುವ ಸಮಾಜಕ್ಕೆ ಒಂದು ದಕ್ಷ, ನಂಬಿಕಸ್ಥ ಮತ್ತು ಸುಸಂಘಟಿತ ಹಾಗೂ ಗುಣಮಟ್ಟದ ವಿದ್ಯುತ್ ನೊಂದಿಗೆ ಗುಣಾಧಾರಿತ ಸೇವೆ ನೀಡಬಲ್ಲ ವಿದ್ಯುತ್ ರಂಗ ಅತ್ಯವಶ್ಯಕ. ಕರ್ನಾಟಕ ರಾಜ್ಯದಲ್ಲಿ ಹಿಂದೆ ವಿದ್ಯುತ್ ಕ್ಷೇತ್ರವನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೋಡಿಕೊಳ್ಳುತ್ತಿತ್ತು. 1999ರಲ್ಲಿ ರಾಜ್ಯ ಸರ್ಕಾರವು ಮಂಡಳಿಯನ್ನು ಎರಡು ಕಂಪೆನಿಗಳನ್ನಾಗಿ ವಿಭಜಿಸಿತು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿಶ್ವೇಶ್ವರಯ್ಯ ವಿದ್ಯುತ್ ನಿಗಮ ನಿಯಮಿತ. 1999ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವನ್ನು ಸ್ಥಾಪಿಸಲಾಯಿತು. ಸುಧಾರಣೆಯ ಮುಂದಿನ ಹಂತದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ವಹಿಸುತ್ತಿದ್ದ ಪ್ರಸರಣ ಮತ್ತು ವಿತರಣಾ ಚಟುವಟಿಕೆಗಳನ್ನು ಬೇರ್ಪಡಿಸಿ ನಾಲ್ಕು ವಿದ್ಯುತ್ ಸರಬರಾಜು ಕಂಪೆನಿಗಳನ್ನು 2002ರ ಜೂನ್ ತಿಂಗಳಲ್ಲಿ ರಚಿಸಲಾಯಿತು. ಈ ರೀತಿ ರಚಿತವಾದ ಕಂಪೆನಿಗಳಲ್ಲಿ ಕೇಂದ್ರಸ್ಥಾನ ಮಂಗಳೂರನ್ನು ಹೊಂದಿರುವ ಮೆಸ್ಕಾಂ ಕೂಡಾ ಒಂದು. ಸರಬರಾಜು ಚಟುವಟಿಕೆಗಳ ವಿಕೇಂದ್ರಿಕರಣದ ನಿಟ್ಟಿನಲ್ಲಿ ಜೂನ್ 2005ರಲ್ಲಿ ಮತ್ತೆ ಮೆಸ್ಕಾಂನಿಂದ ಸೆಸ್ಕೊ ಎಂಬ ಇನ್ನೊಂದು ಕಂಪೆನಿಯನ್ನು ರೂಪಿಸಲಾಯಿತು.

ಮೆಸ್ಕಾಂ ಕರ್ನಾಟಕದ ಈ ಕೆಳಗೆ ತಿಳಿಸಿದ ನಾಲ್ಕು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊಂದಿದೆ.
• ದಕ್ಷಿಣ ಕನ್ನಡ
• ಉಡುಪಿ
• ಶಿವಮೊಗ್ಗ
• ಚಿಕ್ಕಮಗಳೂರು

 

 

ಪ್ರದೇಶ ಮತ್ತು ಆಡಳಿತ:

 

ಮೆಸ್ಕಾಂ 4 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು 32 ತಾಲ್ಲೂಕುಗಳು ಒಳಗೊಂಡಂತೆ 24049 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು 61.64 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಮೆಸ್ಕಾಂ ಮಂಗಳೂರು ಮತ್ತು ಶಿವಮೊಗ್ಗ ದಲ್ಲಿ ಕಾ ಮತ್ತು ಪಾ ವಲಯನ್ನು ಮುಖ್ಯ ಎಂಜಿನಿಯರ್ (ವಿ) ರವರ ನೇತೃತ್ವದಲ್ಲಿರುತ್ತದೆ. ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು  ತಲಾ ನಾಲ್ಕು ಕಾ ಮತ್ತು ಪಾ ವಲಯಗಳನ್ನು ಅಧೀಕ್ಷಕ ಎಂಜಿನಿಯರ್ (ವಿ) ರವರ ನೇತೃತ್ವದಲ್ಲಿರುತ್ತದೆ. ಮೆಸ್ಕಾಂ 14 ಮತ್ತು ಕಾ ಮತ್ತು ಪಾ ವಿಭಾಗಗಳು, 62  - ಕಾ ಮತ್ತು ಪಾ ಉಪವಿಭಾಗಗಳು ಮತ್ತು  243  ಕಾ ಮತ್ತು ಪಾ ಶಾಖಾ ಕಛೇರಿಯನ್ನು ಹೊಂದಿರುತ್ತದೆ.

ವಿದ್ಯುತ್ ವಿತರಣಾ ಸ್ವತ್ತುಗಳು:

 

ಕೆ.ಪಿ.ಟಿ.ಸಿ.ಎಲ್.‌ ವಿತರಣಾ ಕೇಂದ್ರಗಳು 104  Nos
ಮೆಸ್ಕಾಂ ವಿತರಣಾ ಕೇಂದ್ರಗಳು 50  Nos
೧೧ ಕೆ.ವಿ.ಫೀಡರ್ ಗಳು 1379  Nos
ವಿತರಣಾ ಪರಿವರ್ತಕಗಳು 101733  Nos
೩೩ ಕೆ.ವಿ.ವಿದ್ಯುತ್‌ ಮಾರ್ಗಗಳ ಉದ್ದ 1084.54 Kms
ಎಚ್.ಟಿ. ವಿದ್ಯುತ್‌ ಮಾರ್ಗಗಳ ಉದ್ದ 49200.25 Kms
ಎಲ್.ಟಿ. ವಿದ್ಯುತ್‌ ಮಾರ್ಗಗಳ ಉದ್ದ 92401.15 Kms

 

ಮೆಸ್ಕಾಂ ನ ಅಧಿಕಾರಿಗಳು ಮತ್ತು ನೌಕರರ ವಿವರ:

 

ಕೇಡರ್

ಮಂಜೂರಾದ ಹುದ್ದೆ

ಕಾರ್ಯನಿರ್ವಹಿಸುತ್ತಿವ ಹುದ್ದೆ

ಖಾಲಿ

ಖಾಲಿ

ಗ್ರೂಪ್ - ಎ

269

201

68

25.28 %

ಗ್ರೂಪ್ - ಬಿ

372

306

66

17.74 %

ಗ್ರೂಪ್ - ಸಿ

2821

1916

905

32.08 %

ಗ್ರೂಪ್ - ಡಿ

5799

2987

2812

48.49 %

ಒಟ್ಟು

9261

5410

3851

41.58 %

ಮೆಸ್ಕಾಂ ನ ಗ್ರಾಹಕರ ವಿವರಗಳು:

 

ಜಕಾತಿಯ ಆಧಾರದಂತೆ ವರ್ಗ

ಗ್ರಾಹಕರ ಸಂಖ್ಯೆ 

ಬಿ.ಜೆ/ಕೆ.ಜೆ

169383

ಗೃಹ ಬಳಕೆ

1719649

ವಾಣಿಜ್ಯ ಬಳಕೆ

246521

ಕೃಷಿ ಬಳಕೆ

401076 

ಕೈಗಾರಿಕಾ ಬಳಕೆ

37412

ಕುಡಿಯವ ನೀರು

18216

ದಾರಿದೀಪ ಬಳಕೆ

29589

ತಾತ್ಕಾಲಿಕ ಬಳಕೆ

21285 
ಎಚ್ ಟಿ ಬಳಕೆ 2556 
ಇತರೆ 15

 ಒಟ್ಟು

2645702

 

 

ಇತ್ತೀಚಿನ ನವೀಕರಣ​ : 11-10-2023 04:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080