ಅಭಿಪ್ರಾಯ / ಸಲಹೆಗಳು

ವ್ಯಾವಾಹಾರಿಕ ಯೊಜನೆಗಳು

ದೇಶದಲ್ಲಿ ವಿತರಣಾ ಪರವಾನಗಿ ಹೊಂದಿರುವ ಅತ್ಯುತ್ತಮ ಕಂಪೆನಿಗಳಲ್ಲಿ ತಾನು ಒಂದು ಆಗಬೇಕೆಂದುದೇ ಮೆಸ್ಕಾಂನ ಆದರ್ಶ ಧ್ಯೇಯವಾಗಿದೆ. ಇದನ್ನು ಸಾಧಿಸಲು ಕಂಪೆನಿಯು 5 ವರ್ಷಗಳ ವ್ಯವಹಾರ ಯೋಜನೆಯನ್ನು ಪ್ರಸ್ತಾವಿಸುತ್ತದೆ. ಈ ಅವಧಿಯಲ್ಲಿ ಈ ಕೆಳಗಿನವುಗಳಿಗೆ ಪ್ರಧಾನ್ಯತೆ ನೀಡಲಾಗುವುದು.

  • ಕಂದಾಯ ಹೆಚ್ಚಿಸುವುದು. ಸಮರ್ಪಕ ಮಾಪಕಗಳನ್ನು ಅಳವಡಿಸಿ ಹೊಸ ಗ್ರಾಹಕರುಗಳನ್ನು ಹೆಚ್ಚಿಸಿ, ಪ್ರಸಕ್ತ ಬಳಕೆದಾರರ ಹಾಳಾದ ಮಾಪಕಗಳನ್ನು ಬದಲಾಯಿಸಿ ಮತ್ತು ಗುಣಮಟ್ಟದ ವಿದ್ಯುತ್ತನ್ನು ಒದಗಿಸಿ ಮಾಪಕೀಕೃತ ಮಾರಾಟದಲ್ಲಿ ಹೆಚ್ಚಳ ಮಾಡುವುದು.
  • ವೆಚ್ಚಗಳನ್ನು ತಗ್ಗಿಸುವುದು. ಬಂದ ವಿದ್ಯುತ್ತನ್ನು ಸೂಚಿತ ರೀತಿಯಲ್ಲಿ ಮತ್ತು ಹೊರೆ ವ್ಯವಸ್ಥಿತಗೊಳಿಸಿ, ವಿದ್ಯುತ್ ಖರೀದಿ ವೆಚ್ಚವನ್ನು ತಗ್ಗಿಸುವುದು ಕಾರ್ಯ ಮತ್ತು ಪಾಲನಾ ವೆಚ್ಚಗಳು ಮತ್ತು ಸಾಮಾಗ್ರಿ ವಿತರಣಾ ಪಟ್ಟಿಗಳ ನಿಯಂತ್ರಣದಿಂದ ವೆಚ್ಚ ಕಡಿತವನ್ನು ಸಾಧಿಸಬಹುದು.
  • ತಾಂತ್ರಿಕ ಮತ್ತು ವಾಣಿಜ್ಯಿಕ ನಷ್ಟವನ್ನು ತಗ್ಗಿಸುವುದು. ವ್ಯವಸ್ಥಿತವಾಗಿ ದುರಸ್ತಿ ಮತ್ತು ನಿರ್ವಹಣಾ ಕೆಲಸಗಳನ್ನು ಮಾಡುವುದು, ಹೊರೆ ಕೇಂದ್ರಗಳಲ್ಲಿ ಎಚ್.ಟಿ. ಮತ್ತು ಎಲ್.ಟಿ. ಲೈನ್ ಗಳನ್ನು ಹಾಗೂ ಹೊಸ ಪರಿವರ್ತಕಗಳ ಸೇರ್ಪಡೆ ಮೂಲಕ ವ್ಯವಸ್ಥಾ ಜಾಲವನ್ನು ಉನ್ನತೀಕರಿಸಿ ತಾಂತ್ರಿಕ ನಷ್ಟದ ಪ್ರಮಾಣವನ್ನು ತಗ್ಗಿಸುವುಸು. ಅನಧಿಕೃತ ಸ್ಥಾವರಗಳನ್ನು ಗುರುತಿಸಿ ಸಕ್ರಮಗೊಳಿಸುವುದು, ಕಳ್ಳತನದ ನಿಯಂತ್ರಣ, ಸ್ಥಾವರಗಳನ್ನು ಯುಕ್ತ ರೀತಿಯಲ್ಲಿ ಬಿಲ್ ಮಾಡುವುದರಿಂದ ವಾಣಿಜ್ಯ ನಷ್ಟವನ್ನು ಕಡಿಮೆ ಮಾಡುವುದು.
  • ಸರಬರಾಜಿನ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಉತ್ತಮ ಕೈಗಾರಿಕಾ ಸಂಬಂಧ. ಕಂದಾಯದ ದೊಡ್ಡ ಭಾಗ ಕೈಗಾರಿಕಾ ಸ್ಥಾವರಗಳ ಮೂಲಕವೇ ಮೆಸ್ಕಾಂಗೆ ಲಭಿಸುತಿದೆ. ಆದುದರಿಂದ ಈ ಗ್ರಾಹಕರನ್ನು ಸಂತೋಷವಾಗಿಡಲು ಅತೀ ಕಡಿಮೆ ಅಡಚಣೆಗಳೊಂದಿಗೆ ಉತ್ತಮ ಗುಣಮಟ್ಟದ ವಿದ್ಯುತ್ತನ್ನು ನೀಡಲು ಮೆಸ್ಕಾಂ ಶ್ರಮಿಸುತ್ತದೆ. ವಿದ್ಯುತ್ ಕಡಿತದ ಅವಧಿಯಲ್ಲಿ ಕೈಗಾರಿಕಾ ಫೀಡರ್ ಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ವಿನಾಯಿತಿ ನೀಡಲಾಗುತ್ತಿದೆ. ಪರಿವರ್ತಕ ವಿಫಲತೆಯು ಹೆಚ್ಚಿರುವ ಚಿಕ್ಕಮಗಳೂರು ವಿಭಾಗದ ಬೀರೂರು, ಕಡೂರು, ತರೀಕೆರೆ ಮತ್ತು ಸಾಗರ ವಿಭಾಗದ ಸೊರಬ, ಶಿಕಾರಿಪುರ ಮತ್ತು ಹೊಸನಗರ ಈ 6 ಉಪವಿಭಾಗಗಳನ್ನು ಕೆಂಪು ವಲಯವೆಂದು ಗುರುತಿಸಲಾಗಿದೆ. ವ್ಯವಸ್ಥಾ ಸುಧಾರಣೆಯಡಿ ಪ್ರತೀ ವರ್ಷ ಪ್ರತೀ ಉಪವಿಭಾಗದಲ್ಲಿ ಕನಿಷ್ಟ 50 ಹೊಸ ಮತ್ತು ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸಿ, ಅಧಿಕ ಹೊರೆಯಿಂದ ವಿಫಲಗೊಳ್ಳುವ ಪರಿವರ್ತಕಗಳ ಸಂಖ್ಯೆಯನ್ನು ಇಳಿಸಲು ನಿರ್ಧರಿಸಲಾಗಿದೆ.
  • ವಿತರಣಾ ಪರವರ್ತಕಗಳ ವಿಫಲತೆಯನ್ನು ತಗ್ಗಿಸುವುದು. ವಿತರಣಾ ಪರಿವರ್ತಕಗಳ ವಿಫಲತೆಯ ಪ್ರಮಾಣವನ್ನು ತಗ್ಗಿಸಲು ಈ ಕೆಳಗೆ ಕಾಣಿಸಿದ ಕ್ರಮಗಳನ್ನು ಕೈಗೊಳ್ಳಲಾಗುವುದು: 

 

  •          ಸರಿಯಾದ ರೀತಿಯಲ್ಲಿ ಎಲ್.ಟಿ. ಮಾರ್ಗಗಳ ನಿರ್ವಹಣೆ.
  •          ಹೊರೆ ಕೇಂದ್ರಗಳಿಗೆ ಪರಿವರ್ತಕಗಳನ್ನು ಸ್ಥಳಾಂತರಿಸಿ ಎಲ್.ಟಿ. ಮಾರ್ಗಗಳ ಉದ್ದವನ್ನು ಕಡಿಮೆ ಮಾಡುವುದು.
  •          ಹೊರೆ ಕೇಂದ್ರಗಳಲ್ಲಿ ಹೆಚ್ಚು ಸಾಮರ್ಥ್ಯದ ಪರಿವರ್ತಕಗಳ ಬದಲಿಗೆ ಕಡಿಮೆ ಸಾಮರ್ಥ್ಯದ ಪರಿವರ್ತಕಗಳನ್ನು ಅಳವಡಿಸುವುದು.
  •          ಪರಿವರ್ತಕ ಕೇಂದ್ರಗಳನ್ನು ನಿಯತಕಾಲಿಕವಾಗಿ ಸರಿಯಾಗಿ ನಿರ್ವಹಿಸುವುದು.
  •          ನೌಕರರ ಉತ್ಪಾದಕತೆಯಲ್ಲಿ ಹೆಚ್ಚಳ. 

 

ಸುಧಾರಣಾ ಕಾರ್ಯಸೂಚಿಯ ಅಂಗವಾಗಿ ಪ್ರತೀ ಎಸ್ಕಾಂಗಳ ಆರ್ಥಿಕ ವ್ಯವಸ್ಥೆಯನ್ನು ಪುನರ್ ರೂಪಿಸಲಾಗುತ್ತಿದ್ದು ಇದನ್ನು ಕರ್ನಾಟಕ ಸರ್ಕಾರವು ಅನುಮೋದಿಸುವ ಪ್ರಕ್ರಿಯೆಯಲ್ಲಿದೆ. ಹೀಗೆ ಆರ್ಥಿಕ ವ್ಯವಸ್ಥೆಯ ಪುನರ್ ರೂಪಣೆಯು ಸರ್ಕಾರದ ನಿಗಾ ದಸ್ತಾವೇಜಾಗಿದ್ದು ಕೆಳಗಿನ ವಿಷಯಗಳಲ್ಲಿ ಮುಂದಿನ 5 ವರ್ಷಗಳಿಗೆ ಸಂಭವನೀಯ ನಿರೀಕ್ಷೆಯನ್ನೊಳಗೊಂಡಿದೆ:

  •          ವ್ಯವಸ್ಥಾ ಒಳಹರಿವು.
  •          ವಿತರಣಾ ನಷ್ಟ.
  •          ವಿದ್ಯುತ್ ಖರೀದಿ ವೆಚ್ಚ. 
  •          ವರ್ಗವಾರು ಬೆಳವಣಿಗೆ ದರಗಳು.
  •          ಮಾರಾಟ, ಕಂದಾಯ ಬೇಡಿಕೆ, ಸಂಗ್ರಹ ದಕ್ಷತೆ.
  •          ಸ್ವೀಕರಿಸಬಹುದಾದ ಮತ್ತು ಪಾವತಿಮಾಡಬಹುದಾದ ಮಟ್ಟ. 
  •          ಯೋಚಿತ ಖರ್ಚು.
              
                

ಮೇಲಿನ ನಿರೀಕ್ಷೆಯನ್ನು ತಲುಪಲು, ಉಪವಿಭಾಗಗಳ ಕಾರ್ಯ ನಿರ್ವಹಣಾ ಮಟ್ಟವನ್ನು ತಿಳಿಸುವ ಒಂದು ವಿವರವಾದ ಯೋಜನೆಯನ್ನು ಸಿದ್ಧಪಡಿಸಬೇಕು. ಒಂದು ಬಾರಿ ಈ ಮಾನದಂಡಗಳನ್ನು ಸ್ವಷ್ಟವಾಗಿ ಗುರುತಿಸಿದಲ್ಲಿ ಲೆಕ್ಕಕ್ಕೆ ಸಿಗಬಲ್ಲ ಗುರಿಯನ್ನು ಎಲ್ಲಾ ಕ್ಷೇತ್ರ ಘಟಕಗಳಿಗೆ ನಿಗದಿಪಡಿಸಬೇಕಾಗುತ್ತದೆ. ಈ ಗುರಿಯನ್ನು ಸಾಧಿಸಲು ಬೇಕಾದ ಸಾಮಾಗ್ರಿಗಳು, ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳನ್ನು ಒದಗಿಸಲಾಗುವುದು. ನಿಯತಕಾಲಿಕವಾಗಿ ಕಾರ್ಯ ನಿರ್ವಹಣೆಯನ್ನು ನವೀಕರಿಸಲು ನಿಗಾ ಇಡುವ ಮತ್ತು ವರದಿ ಮಾಡುವ ಪದ್ಧತಿಯೊಂದನ್ನು ಅಭಿವೃದ್ಧಿಪಡಿಸಬೇಕಾಗಿದೆ.

ಇತ್ತೀಚಿನ ನವೀಕರಣ​ : 10-02-2020 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080