ಅಭಿಪ್ರಾಯ / ಸಲಹೆಗಳು

ಪ್ರಸ್ತಾವನೆ

ಬ್ರಿಟಿಷರ ಆಡಳಿತವಿದ್ದಾಗಲೇ 20ನೇ ಶತಮಾನದ ಆರಂಭದಲ್ಲಿ ಕರ್ನಾಟಕ ರಾಜ್ಯವು ವಿದ್ಯುತ್ತನ್ನು ಉತ್ಪಾದಿಸಿ, ಪ್ರಸರಣಗೊಳಿಸಿ ಮತ್ತು ಗ್ರಾಹಕರಿಗೆ ಸರಬರಾಜು ಮಾಡಿದ ಪ್ರಪ್ರಥಮ ರಾಜ್ಯವಾಗಿರುವುದು ಸರ್ವವಿದಿತ ವಿಷಯವಾಗಿದೆ. ನಾವು ಸಾಕಷ್ಟು ನದಿ ನೀರಿನ ಸಂಪನ್ಮೂಲ ಹೊಂದಿದ್ದು, ಜಲವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವು ಮೊದಲಿಗನಾಗಿದೆ. ಸ್ವಾತಂತ್ರ್ಯ ಬಂದ ಬಳಿಕ ಕೂಡಲೇ ಸರ್ಕಾರಿ ವಿದ್ಯುತ್ ಇಲಾಖೆ ಅಸ್ತಿತ್ವಕ್ಕೆ ಬಂತು. ತದನಂತರ ಇದನ್ನು ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯನ್ನಾಗಿ ಪರಿವರ್ತಿಸಿ ವಿದ್ಯುತ್ ಪ್ರಸರಣ ಮತ್ತು ವಿತರಣೆ ಕೆಲಸಗಳನ್ನು ನಿರ್ವಹಿಸಲಾಗುತ್ತಿತ್ತು. ಜಲವಿದ್ಯುತ್ ನಿರ್ಮಾಣ ಯೋಜನೆಗಳನ್ನು ನೋಡಿಕೊಳ್ಳಲು ಎಚ್.ಇ.ಸಿ.ಪಿ. ಗೆ ವಹಿಸಲಾಗಿತ್ತು. 1970-80ರ ಮಧ್ಯೆ ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂದು ಪುನರ್ ನಾಮಕರಣ ಮಾಡಲಾಯಿತು ಮತ್ತು ಜಲ ವಿದ್ಯುತ್ ನಿಗಮ ಯೋಜನೆಯನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತವಾಗಿ ಪರಿವರ್ತಿಸಲಾಯಿತು.

 

1999ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣ ಕಾಯಿದೆಯನ್ನು ತಂದು ಕರ್ನಾಟಕ ವಿದ್ಯುತ್ ಮಂಡಳಿಯನ್ನು ವಿಭಜಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿಶ್ವೇಶ್ವರಯ್ಯ ನಿಗಮ ನಿಯಮಿತವೆಂದು ಪುನರ್ ರಚಿಸಿತು.

 

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವನ್ನು ರಚಿಸಿ, ವಿದ್ಯುತ್ ರಂಗದ ಅಭಿವೃದ್ಧಿ, ಅದರೊಳಗಿರುವ ಸ್ಪರ್ಧೆಗೆ ಉತ್ತೇಜನ ನೀಡುವುದು, ಗ್ರಾಹಕರ ಆಸಕ್ತಿಯನ್ನು ರಕ್ಷಿಸುವುದು ಮತ್ತು ವಿದ್ಯುತ್ ದರ ಪರಿಷ್ಕರಣೆ, ಸಬ್ಸಿಡಿಗಳ ಕುರಿತಾಗಿ ಪಾರದರ್ಶಕತೆ, ದಕ್ಷ ಮತ್ತು ಉದಾರ ಪರಿಸರವಾದಿ ನೀತಿಗಳಿಗೆ ಉತ್ತೇಜನ ನೀಡುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸಲು ತಿಳಿಸಲಾಯಿತು.

 

ವಿದ್ಯುತ್ ರಂಗದಲ್ಲಿ ಮೇಲೆ ತಿಳಿಸಿದ ಸುಧಾರಣೆಯನ್ನು ಜಾರಿಗೆ ತಂದ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯ ವಿದ್ಯುತ್ ಮಂಡಳಿಯ ಚೆನ್ನಾಗಿಲ್ಲದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಕೊರತೆಯನ್ನು ನೀಗಿಸಿ ನಂಬಲರ್ಹ ಮತ್ತು ಗುಣಮಟ್ಟದ ವಿದ್ಯುತ್ತನ್ನು ಗ್ರಾಹಕರಿಗೆ ನೀಡುವಲ್ಲಿ ಸುಧಾರಣೆ ತರಲು ಮೇಲೆ ತಿಳಿಸಿದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

 

2002ರ ಮಧ್ಯಭಾಗದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವನ್ನು ಮತ್ತೆ ವಿಭಜಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು 4 ವಿದ್ಯುತ್ ಸರಬರಾಜು ಕಂಪೆನಿಗಳನ್ನು ರಚಿಸಲಾಯಿತು. ಇದರಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ವಿದ್ಯುತ್ ಪ್ರಸರಣ ಮತ್ತು 4 ವಿದ್ಯುತ್ ಕಂಪೆನಿಗಳಾದ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಬೆಸ್ಕಾಂ), ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಹೆಸ್ಕಾಂ), ಗುಲ್ಬರ್ಗ ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ (ಜೆಸ್ಕಾಂ)ಗಳು ವಿದ್ಯುಚ್ಛಕ್ತಿ ಸರಬರಾಜಿನ ಕೆಲಸ ನೋಡಿಕೊಳ್ಳಲು ತಿಳಿಸಲಾಯಿತು. ಇವುಗಳು ಸ್ವತಂತ್ರ ಸರಬರಾಜು ಕಂಪೆನಿಗಳಾಗಿವೆ ಮತ್ತು ಇವುಗಳು ದಿನಾಂಕ 01.06.2002 ರಿಂದ ತಮ್ಮ ವ್ಯವಹಾರವನ್ನು ಪ್ರಾರಂಭಿಸಿವೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಹೀಗೆ 9 ಜಿಲ್ಲೆಗಳ ವ್ಯಾಪ್ತಿ ಹೊಂದಿ ಮೆಸ್ಕಾಂ ಆಸ್ತಿತ್ವಕ್ಕೆ ಬಂದಿತ್ತು. ಆರಂಭದಲ್ಲಿ ಕಂಪೆನಿಯು ಪ್ರದೇಶದ ವ್ಯಾಪ್ತಿಯಲ್ಲಿ ಕೇವಲ ಮಂಗಳೂರಿನಲ್ಲಿ ಒಂದೇ ವಲಯನ್ನು ಹೊಂದಿದ್ದು, ಇದನ್ನು ಮತ್ತೆ 2 ವಲಯಗಳಾಗಿ ವಿಭಜಿಸಲಾಯಿತು. ಮಂಗಳೂರು ವಲಯವು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಗೊಳಪಟ್ಟಿದ್ದು ಉಳಿದ 5 ಜಿಲ್ಲೆಗಳು ಮೈಸೂರು ವಲಯ ವ್ಯಾಪ್ತಿಗೊಳಪಟ್ಟಿದ್ದವು.

 

2005ರ ಮಾರ್ಚ್ ನಲ್ಲಿ ಮತ್ತೆ ಮೆಸ್ಕಾಂನ್ನು ಮೆಸ್ಕಾಂ ಮತ್ತು ಸೆಸ್ಕ್ ಎಂಬ 2 ಕಂಪೆನಿಗಳಾಗಿ ವಿಭಜಿಸಲಾಯಿತು. ವಿಭಜನೆಯ ಬಳಿಕ 26,222 ಚ.ಕಿ. ವಾಪ್ತಿ ಹೊಂದಿದ, 58 ಲಕ್ಷ ಜನಸಂಖ್ಯೆ ಇರುವ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಕಾರ್ಯ ಮತ್ತು ಪಾಲನಾ ವಲಯವನ್ನು ಮೆಸ್ಕಾಂ ತನ್ನಲೇ ಇಟ್ಟುಕೊಂಡಿದೆ. ಮೈಸೂರು ಕಾರ್ಯ ಮತ್ತು ಪಾಲನಾ ವಲಯವನ್ನು ಸೆಸ್ಕ್ ಗೆ ನೀಡಲಾಗಿದ್ದು, ಇದು ಉಳಿದ 5 ಜಿಲ್ಲೆಗಳನ್ನು ಹೊಂದಿದೆ. ಮೆಸ್ಕಾಂನಲ್ಲಿ ನಂತರದ ದಿನಗಳಲ್ಲಿ ಶಿವಮೊಗ್ಗ ಕಾರ್ಯ ಮತ್ತು ಪಾಲನಾ ವಲಯ ಕಛೇರಿಯನ್ನು ರಚಿಸಲಾಯಿತು.

 

 

 

ಮಂಗಳೂರು ವಲಯವು ಮಂಗಳೂರು ಮತ್ತು ಉಡುಪಿ, ಶಿವಮೊಗ್ಗ ವಲಯವು ಶಿವಮೊಗ್ಗ ಮತ್ತು ಚಿಕ್ಕಮಗಳೂರುಗಳಲ್ಲಿ ವೃತ್ತ ಕಛೇರಿಗಳನ್ನು ಕ್ರಮವಾಗಿ ಹೊಂದಿದ್ದು  13 ಕಾರ್ಯ ಮತ್ತು ಪಾಲನಾ ವಿಭಾಗಗಳು ಅವುಗಳ ಕಾರ್ಯ ವ್ಯಾಪ್ತಿಯಲ್ಲಿ ಬರುತ್ತದೆ. ಮಂಗಳೂರಿನ ಹೊಸ ಕಾರ್ಪೊರೇಟ್ ಕಛೇರಿ ಹೊರತುಪಡಿಸಿ ಕಾರ್ಯ ಮತ್ತು ಪಾಲನಾ ವಲಯಗಳು, ವೃತ್ತ, ವಿಭಾಗೀಯ ಮತ್ತು ಕೆಳಗಿನ ಕಛೇರಿಗಳಲ್ಲಿನ ಸಿಬ್ಬಂದಿ ಸಂಖ್ಯೆಯು ಎಸ್ಕಾಂಗಳ ರಚನೆಯ ಹಿಂದೆ ಇದ್ದಷ್ಟೇ ಇದೆ. ಎಲ್ಲಾ ಅಧಿಕಾರಿಗಳು ಮತ್ತು ನೌಕರರೂ ಸೇರಿ ಮೆಸ್ಕಾಂನ ಒಟ್ಟು ಸಿಬ್ಬಂದಿಗಳ ಸಂಖ್ಯೆಯು 5410 ಇದ್ದು, ಮಂಜೂರಾದ ಹುದ್ದೆಗಳ ಸಂಖ್ಯೆಯು 9261 ಆಗಿದೆ.

 

ಸುಧಾರಣೆಯ ಮತ್ತು ಕಾರ್ಯಕ್ರಮಗಳ ಪುನರಚನೆಯ ನಿಟ್ಟಿನಲ್ಲಿ ಪ್ರತ್ಯೇಕ ಸ್ವತಂತ್ರ ಸಂಸ್ಥೆಗಳಾಗಿ, ವಿಶೇಷ ಜವಾಬ್ದಾರಿಗಳೊಂದಿಗೆ ಎಸ್ಕಾಂಗಳನ್ನು ರಚಿಸಲಾಗಿದೆ. ಕ.ವಿ.ಪ್ರ.ನಿ.ನಿ., ವಿ.ವಿ.ನಿ.ನಿ., ಕ.ವಿ.ನಿ.ನಿ., ಕ.ನ.ಇಂ.ಅ.ನಿ. ಮತ್ತು ವಿದ್ಯುತ್ ಇನ್ಸ್ ಪೆಕ್ಟೋರೇಟ್ ಗಳು ಪರಸ್ವರ ಸಹಕಾರ ಮತ್ತು ಸಮನ್ವಯದಿಂದ ಒಟ್ಟಾರೆ ರಂಗ ಸುಧಾರಣೆಯಲ್ಲಿ ಹೆಚ್ಚಿನ ತಿಳುವಳಿಕೆಯನ್ನು ಪ್ರದರ್ಶಿಸುತ್ತಿದ್ದು ಎಸ್ಕಾಂಗಳು ಇಂತಹ ಕಂಪೆನಿಗಳೊಂದಿಗೆ ಕೂಡಿ ಕೆಲಸ ನಿರ್ವಹಿಸಬೇಕಾಗಿದೆ. ರಾಜ್ಯದ ಆರ್ಥಿಕತೆಗೆ ಇದರಿಂದ ವಿದ್ಯುತ್ ಕ್ಷೇತ್ರವು ನಿವ್ವಳ ಕೊಡುಗೆ ನೀಡಿದಂತಾಗುತ್ತದೆ. ಮೇಲೆ ತಿಳಿಸಿದ ಎಲ್ಲಾ ಕಂಪೆನಿಗಳು/ಸಂಸ್ಥೆಗಳು ಪೂರ್ತಿಯಾಗಿ ಸ್ವತಂತ್ರ ಸರ್ಕಾರಿ ಕಂಪೆನಿಗಳಾಗಿದ್ದು ಸಂಸ್ಥೆಯ ವಿವರಣಾ ಪತ್ರದಡಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ರಾಜ್ಯ ಸರ್ಕಾರ ಮತ್ತು ನಿಯಂತ್ರಣ ಪ್ರಾಧಿಕಾರವಾದ ಕ.ವಿ.ನಿ. ಆಯೋಗ ನೀಡುವ ಪರವಾನಗಿ ಮತ್ತು ಆದೇಶಗಳನ್ವಯ ಕಾರ್ಯ ನಿರ್ವಹಿಸುತ್ತಿವೆ.

 

ಇತ್ತೀಚಿನ ನವೀಕರಣ​ : 19-05-2021 04:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080