ಅಭಿಪ್ರಾಯ / ಸಲಹೆಗಳು

ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ

 

ವೇಗವರ್ಧಿತ ಆರ್ಥಿಕ ಬೆಳವಣಿಗೆಗೆ ವಿದ್ಯುತ್ ಪ್ರಮುಖ ಅಂಶವಾಗಿದೆ ಮತ್ತು ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಗೆ ಇದು ಪ್ರಮುಖವೆಂದು ಪರಿಗಣಿಸಲಾಗಿದೆ. ವಿತರಣಾ ಕ್ಷೇತ್ರದ ಸಮರ್ಥ ನಿರ್ವಹಣೆಯು ಇಂದು ವಿದ್ಯುತ್ ಕ್ಷೇತ್ರದಲ್ಲಿ ನಿಜವಾದ ಸವಾಲು ಅಗಿರುತ್ತದೆ.

 

೧. ವ್ಯವಸ್ಥೆ ಬಲಪಡಿಸುವುದು

 

ಕೇಂದ್ರ ಸರಕಾರವು ನಗರ/ಉಪ-ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ "ಐ.ಪಿ.ಡಿ.ಎಸ್" ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಮೆ|| ಪಿ.ಎಫ್.ಸಿ, ನವದೆಹಲಿಯು ನೋಡಲ್ ಏಜನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.


ಈ ಯೋಜನೆಯಲ್ಲಿ ಉಪಪ್ರಸರಣ ಹಾಗೂ ವಿತರಣಾ ಮಾರ್ಗಗಳ ಬಲಪಡಿಸುವಿಕೆ, ಮೀಟರಿಂಗ್, ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಸೌರಫಲಕಗಳ ಅಳವಡಿಕೆ, ಮಾಹಿತಿ ತಂತ್ರಜ್ಞಾನದ ಅಳವಡಿಕೆ ಮುಂತಾದ ಕಾರ್ಯಕ್ರಮಗಳು ಒಳಗೊಂಡಿರುತ್ತವೆ. ಪ್ರಸ್ತುತ, ಮೇಲೆ ತಿಳಿಸಿರುವ ಮಾಹಿತಿ ತಂತ್ರಜ್ಞಾನದ ಅಳವಡಿಕೆ ಕಾರ್ಯವನ್ನು ಬಿಟ್ಟು ಉಳಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೆ|| ಪಿ.ಎಫ್.ಸಿಯಿಂದ ರೂ. 157.80 ಕೋಟಿ ಮೊತ್ತಕ್ಕೆ ಮ.ವಿ.ಸ.ಕಂ.ನ 4 ವೃತ್ತಗಳಾದ ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರುಗಳ 29 statutory ಪಟ್ಟಣಗಳನ್ನು (statutory towns) ಒಳಗೊಂಡಂತೆ ಕಾಮಗಾರಿ ನಿರ್ವಹಿಸಲು ಮಾರ್ಚ್-2016 ರಲ್ಲಿ ಮಂಜೂರಾತಿ ದೊರೆತಿರುತ್ತದೆ. ಪ್ರಸ್ತುತ ಸದರಿ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ.


ಮುಂದುವರೆದು, ಮಂಗಳೂರು, ಉಡುಪಿ ಮತ್ತು ಶಿವಮೊಗ್ಗ ವೃತ್ತಗಳಲ್ಲಿ ಐ.ಪಿ.ಡಿ.ಎಸ್ ಅನುಷ್ಠಾನಕ್ಕೆ ಹೆಚ್ಚುವರಿ ರೂ.9.80 ಕೋಟಿ ಹಣಕಾಸಿನ ನೆರವನ್ನು ಫೆಬ್ರವರಿ-2018ರಲ್ಲಿ ನೀಡಲಾಗಿದೆ. ಪ್ರಸ್ತುತ ಸದರಿ ಕಾಮಗಾರಿಯೂ ಪೂರ್ಣಗೊಂಡಿದೆ.


ಮೆ||ಪಿ.ಎಫ್.ಸಿ ಯು ಐ.ಪಿ.ಡಿ.ಎಸ್ ಯೋಜನೆಯಡಿಯಲ್ಲಿ 6 ಸಂಖ್ಯೆಯ ಗ್ಯಾಸ್ ಇನ್ಸುಲೇಟೆಡ್ ಸಬ್‍ಸ್ಟೇಷನ್ಸ್‍ಗಳನ್ನು ಅನುಷ್ಠಾನಗೊಳಿಸಲು ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ವೃತ್ತಗಳನ್ನು ಒಳಗೊಂಡಂತೆ ರೂ. 39.48 ಕೋಟಿ ಮೊತ್ತಕ್ಕೆ ಡಿಸೆಂಬರ್-2018ರಲ್ಲಿ ಮಂಜೂರಾತಿ ನೀಡಿರುತ್ತದೆ. ಅದರಂತೆ ಮಂಗಳೂರು ವೃತ್ತದ ಮಂಗಳೂರು ಮತ್ತು ಬಂಟ್ವಾಳ ಪಟ್ಟಣಗಳನ್ನು ಹಾಗೂ ಉಡುಪಿ ವೃತ್ತದ ಉಡುಪಿ ಮತ್ತು ಸಾಲಿಗ್ರಾಮ ಪಟ್ಟಣಗಳನ್ನು ಒಳಗೊಂಡಂತೆ 4 ಸಬ್‍ಸ್ಟೇಷನ್‍ಗಳಿಗೆ ಟೆಂಡರ್ ಕರೆದು ನವಂಬರ್-2019 ರಲ್ಲಿ ಅವಾರ್ಡ್ ನೀಡಲಾಗಿದ್ದು, ಪ್ರಸ್ತುತ ಈ ಕಾಮಗಾರಿಗಳು ಪ್ರಗತಿಯಲ್ಲಿವೆ.


 

೨.  ಐಟಿ ಹಂತ -೨

 

ಕೇಂದ್ರ ಸರಕಾರದ ಐ.ಪಿ.ಡಿ.ಎಸ್ ಯೋಜನೆಯಲ್ಲಿ, ಮೆಸ್ಕಾಂ-ಕರ್ನಾಟಕವು ಐಟಿ- ಹಂತ -2 ರಲ್ಲಿ,  18 ಪಟ್ಟಣಗಳಲ್ಲಿ ಅನುಷ್ಠಾನ ಕಾರ್ಯಗಳನ್ನು 4.76 ಕೋಟಿ ರೂ. ಗಳಿಗೆ ಕೈಗೆತ್ತಿಕೊಂಡಿದೆ. ಐಟಿ- ಹಂತ -2 ರಲ್ಲಿ ಜಿಐಎಸ್ ಸಮೀಕ್ಷೆ, ದತ್ತಾಂಶ ಸಂಗ್ರಹಣೆ ಮತ್ತು ದತ್ತಾಂಶ ಮರುಪಡೆಯುವಿಕೆ ಮತ್ತು ಐಟಿ ಮೂಲಸೌಕರ್ಯಗಳನ್ನು ಒಳಗೊಂಡಿವೆ.

 

ಐಟಿ ಅನುಷ್ಠಾನದಿಂದಾಗಿ ಒಟ್ಟು ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳ ವಿಶ್ಲೇಷಣೆ, ವಿದ್ಯುತ್ ಕಡಿತ, ಗ್ರಾಹಕರ ದೂರು, ಹೊಸ ಸಂಪರ್ಕ ಡೇಟಾ ಮತ್ತು ವಿದ್ಯುತ್ ವಿತರಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಸೂಚ್ಯಂಕಗಳ ವಿಶ್ಲೇಷಣೆ ಸುಲಭವಾಗಿದೆ. ಭವಿಷ್ಯದ ಕಾರ್ಯತಂತ್ರದ ಯೋಜನೆಗೆ ಇದು ಪ್ರಯೋಜನಕಾರಿಯಾಗಿದೆ, ಇದು ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಶಕ್ತಿಯನ್ನು ಒದಗಿಸಲು ನಿರ್ಣಾಯಕ ಪಾತ್ರ ವಹಿಸುತ್ತದೆ.

 

ಅಂಕಿಅಂಶ-

ಕ್ರ.ಸಂ ವೃತ್ತ ಹೆಸರು  ಪಟ್ಟಣದ ಹೆಸರು ಫೀಡರ್ ಗಳ ಸಂಖ್ಯೆ
ಮಂಗಳೂರು ಉಳ್ಳಾಲ
ಮುಲ್ಕಿ
ಮುಡಬಿದ್ರೆ
ಸುಳ್ಯ
ಬೆಳ್ತಂಗಡಿ
ಉಡುಪಿ ಕಾರ್ಕಳ
ಸಾಲಿಗ್ರಾಮ
ಕುಂದಾಪುರ
ಚಿಕ್ಕಮಗಳೂರು ಎನ್‌ ಆರ್‌ ಪುರ
೧೦ ಮೂಡಿಗೆರೆ
೧೧ ಶೃಂಗೇರಿ
೧೨ ಕೊಪ್ಪ
೧೩ ಬೀರೂರು
೧೪ ಶಿವಮೊಗ್ಗ ತೀರ್ಥಹಳ್ಳಿ
೧೫ ಹೊಸನಗರ
೧೬ ಜೋಗ್
೧೭ ಶಿರಲಕೊಪ್ಪ
೧೮ ಸೊರಬ

ಇತ್ತೀಚಿನ ನವೀಕರಣ​ : 08-05-2020 12:26 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080