ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಮೆಸ್ಕಾಂನಿಂದ ನೂತನ ಮೊಬೈಲ್‌ ಆಪ್‌ ಬಿಡುಗಡೆ

“ನನ್ನ ಮೆಸ್ಕಾಂ”

 

ಮೆಸ್ಕಾಂನಿಂದ ನೂತನ ಮೊಬೈಲ್‌ ಆಪ್‌  ಬಿಡುಗಡೆ

 

ಮೆಸ್ಕಾಂ ತನ್ನ ಗ್ರಾಹಕ ಸೇವಾ ಕಾರ್ಯವನ್ನು ಉನ್ನತೀಕರಿಸುವ ಮತ್ತು ಗ್ರಾಹಕರೊಂದಿಗಿನ ಬಾಂಧವ್ಯವನ್ನು ಬಲಪಡಿಸುವ ದಿಕ್ಕಿನಲ್ಲಿ ಸದಾ ಕಾರ್ಯಪ್ರವೃತ್ತವಾಗಿದ್ದು, ಇದೀಗ ತನ್ನ ಗ್ರಾಹಕ ಸ್ನೇಹಿ ಕಾರ್ಯಕ್ರಮದನ್ವಯ ಆಂಡ್ರಾಯ್ಡ್‌ (Android) ಮತ್ತು ಐಒಎಸ್‌ (IOS) ವೇದಿಕೆಯಡಿಯಲ್ಲಿ ʼನನ್ನ ಮೆಸ್ಕಾಂʼ ಎಂಬ ಮೊಬೈಲ್‌ ಅಪ್ಲಿಕೇಷನ್‌ನ್ನು ಅಭಿವೃದ್ಧಿ ಪಡಿಸಿದೆ.

 

ಈ ನೂತನ ಮೊಬೈಲ್‌ ಅಪ್ಲಿಕೇಷನ್‌ ಮೆಸ್ಕಾಂ ಗ್ರಾಹಕರಿಗೆ ಮತ್ತು ಉದ್ಯೋಗಿಗಳಿಗೆ ಈ ಕೆಳಗಿನ ವೈಶಿಷ್ಟ್ಯತೆಗಳನ್ನು ನೀಡುತ್ತದೆ.

 

ಗ್ರಾಹಕರಿಗೆ:

 • ಮೆಸ್ಕಾಂ ಬಗ್ಗೆ ಸಾಮಾನ್ಯ ಮಾಹಿತಿಗಳಾದ ಗೂಗಲ್‌ ಮ್ಯಾಪ್‌ನಲ್ಲಿ ಮೆಸ್ಕಾಂ ಕಛೇರಿಗಳ ಗುರುತಿಸುವಿಕೆ, FAQಗಳು, ಹೊಸ ಸಂಪರ್ಕಕ್ಕೆ ಸಂಬಂಧಿಸಿದ ಅವಶ್ಯಕತೆಗಳು ಮತ್ತು ಕಾಯಿದೆಗಳ ಮಾಹಿತಿ, ಯೋಜನೆಗಳ ಮಾಹಿತಿ ಇತ್ಯಾದಿ.
 • ಒಂದು ಅಥವಾ ಹೆಚ್ಚಿನ ಖಾತೆಗಳ / ಸ್ಥಾವರಗಳ ನೋಂದಣಿಗೆ ಅವಕಾಶ.
 • ವೈಯಕ್ತಿಕ ಮತ್ತು ಗುಂಪುಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿ.
 • ಹೆಚ್ಚುವರಿ ಭದ್ರತಾ ಠೇವಣಿಯನ್ನು ಆನ್‌ಲೈನ್‌ ಮೂಲಕ ಪಾವತಿಸಲು ಅವಕಾಶ.
 • ಬಿಲ್‌ ಮತ್ತು ಪಾವತಿ ರಶೀದಿಗಳನ್ನು ಪಿಡಿಎಫ್‌ (PDF) ಮೂಲಕ ಡೌನ್‌ಲೋಡ್‌ಗೆ ಆಯ್ಕೆ.
 • ವಿದ್ಯುತ್‌ ಬಳಕೆಯ ಲೆಕ್ಕಾಚಾರ ಮತ್ತು ಬಿಲ್ಲಿಂಗ್‌ ಮೊತ್ತ ಪಾವತಿ ಇತಿಹಾಸ
 • ಬಳಕೆ, ಬಿಲ್ಲಿಂಗ್‌ ಮತ್ತು ಪಾವತಿ ಡ್ಯಾಶ್‌ಬೋರ್ಡ್‌.
 • ಖಾತೆಗೆ ಸಂಬಂಧಿಸಿದ ಮಾಹಿತಿಗಳಾದ ಆರ್‌.ಆರ್‌.ನಂಬ್ರ, ಮಂಜೂರಾದ ವಿದ್ಯುತ್‌ ಪ್ರಮಾಣ, ಸಂಪರ್ಕ ಮಾಹಿತಿಗಳನ್ನು ವೀಕ್ಷಿಸಲು ಅವಕಾಶ.
 • ನಿಗಧಿತ ವಿದ್ಯುತ್‌ ಕಡಿತ ಮಾಹಿತಿ.
 • ಮುಂಬರುವ ಒಂದು ವಾರದ ವಿದ್ಯುತ್‌ ನಿಲುಗಡೆ/ವ್ಯತ್ಯಯದ ಮಾಹಿತಿ
 • ದೂರು ನೋಂದಣಿ, ಸ್ಟೇಟಸ್‌ ಟ್ರ್ಯಾಕಿಂಗ್‌ (ಸ್ಥಿತಿಗತಿ ತಿಳಿಯುವಿಕೆ) ಇತ್ಯಾದಿ.

 

ಉದ್ಯೋಗಿಗಳಿಗೆ :

 • ದೂರುಗಳ ಡ್ಯಾಶ್‌ಬೋರ್ಡ್‌, ಸ್ಟೇಟಸ್‌ ಟ್ರ್ಯಾಕಿಂಗ್‌, ನವೀಕರಣ ಇತ್ಯಾದಿ
 • ವಿದ್ಯುತ್‌ ನಿಲುಗಡೆ/ವ್ಯತ್ಯಯದ ಮಾಹಿತಿಗಳು .

ಇತ್ತೀಚಿನ ನವೀಕರಣ​ : 19-02-2021 11:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ